BIS ಹಾಲ್ ಮಾರ್ಕ್ ಇರುವ ಚಿನ್ನಾಭರಣವನ್ನು ಆರ್-ಗೋಲ್ಡ್ ಗೆ ಮಾರುವ ಯೋಚನೆ ಮಾಡಿದಾಗ ನೀವು ಈ ಕೆಳಗಿನ ಬಾಕ್ಸ್ ಗಳಲ್ಲಿ ನಿಮ್ಮ ಶುದ್ಧ ಚಿನ್ನ, ಕಾಂಪೊಸಿಟ್ ಚಿನ್ನ ಮತ್ತು ಕಾಂಪೊಸಿಟ್ ಚಿನ್ನದ ಆಭರಣದ ಶೇಕಡಾ ಚಿನ್ನದ ಪ್ರಮಾಣವನ್ನು ತುಂಬುವುದರಿಂದ ನೀವು ಮಾರುತ್ತಿರುವ ಚಿನ್ನದ ಪ್ರತಿ ಗ್ರಾಂನ ಈಗಿನ ದರವನ್ನು ಕಂಡುಹಿಡಿಯಬಹುದು. ಕೆಲವೊಮ್ಮೆ ಈ ದರ ಮಾರುಕಟ್ಟೆಯ ಅನುಸಾರ ಬದಲಾಗುತ್ತದೆ. ನಿಮ್ಮ ಶುದ್ಧ ಮತ್ತು ಕಾಂಪೊಸಿಟ್ ಚಿನ್ನ, ಕಾಂಪೊಸಿಟ್ ಚಿನ್ನದ ಆಭರಣದ ಶೇಕಡಾ ಪ್ರಮಾಣವನ್ನು ಕೆಳಗೆ ನೋಡಬಹುದು. ಅದರಂತೆ ಮೌಲ್ಯಮಾಪನದ ದರ ನಿಗದಿ ಪಡಿಸಲಾಗುತ್ತದೆ.
BIS ಹಾಲ್ ಮಾರ್ಕ್ ಇಲ್ಲದ ಚಿನ್ನಾಭರಣವನ್ನು ನಮ್ಮ ಚಿನ್ನದ ಮೌಲ್ಯಮಾಪಕರು ಪರೀಕ್ಷಿಸುತ್ತಾರೆ. ನಂತರ ನೀವು ಈ ಕೆಳಗಿನ ಫಾರಂ ಅನ್ನು ತುಂಬಿ ಮತ್ತು ಚಿನ್ನದ ಆಗಿನ ದರವನ್ನು ಪಡೆಯಿರಿ.
The percentage of gold may be as follows.The price will be based on the gold value.
Percentage basis | The current price of 1 gm gold |
99.99 % | Rs: 7935 |
91.67 % | Rs: 7275 |
87.50 % | Rs: 6944 |
83.30 % | Rs: 6611 |
75.00 % | Rs: 5952 |
62.50 % | Rs: 4960 |
1. ಗ್ರಾಹಕರು, ಪತಿ-ಪತ್ನಿ ಜೊತೆಯಾಗಿ ಬರಬೇಕು ಮತ್ತು ಅವರು ಮಾರುತ್ತಿರುವ ಚಿನ್ನ ಯಾವ ಅಂಗಡಿಯಿಂದ ಖರೀದಿಸಿದ್ದು ಮುಂತಾದ ಮಾಹಿತಿಯನ್ನು ನೀಡಬೇಕು. ಇದು ಸರಿ ಎನಿಸಿದರೆ, ಆರ್-ಗೋಲ್ಡ್ ಶಾಖೆಯ ಆಭರಣ ಮೌಲ್ಯಮಾಪಕರು ಚಿನ್ನದ ಆಭರಣದ ಗುಣಮಟ್ಟವನ್ನು ಪರೀಕ್ಷಿಸಿ ಅದನ್ನು 99.99 ಶುದ್ಧ ಚಿನ್ನದ ಆಗಿನ ಮಾರುಕಟ್ಟೆಯ ದರದ ಜೊತೆ ಹೋಲಿಸುತ್ತಾರೆ. ನಂತರ 1 ಗ್ರಾಂ ಚಿನ್ನಕ್ಕೆ ಸಿಗುವ ನಿಖರ ಮೊತ್ತವನ್ನು ಅವರಿಗೆ ತಿಳಿಸುತ್ತಾರೆ. ಮಾರಾಟಗಾರರು ಆ ದರವನ್ನು ಒಪ್ಪಿಕೊಂಡರೆ ಮಾತ್ರ ನಮ್ಮ ಕಛೇರಿ ಚಿನ್ನ ಮತ್ತು ಆಭರಣಗಳನ್ನು ಸ್ವೀಕರಿಸುತ್ತದೆ. ನಾವು ತಿಳಿಸಿದ ದರಕ್ಕೆ ಚಿನ್ನವನ್ನು ಮಾರುವುದು ಕಡ್ಡಾಯವಲ್ಲ. ಹಾಗೆಯೇ, ಅದು ನಂಬಲರ್ಹ ವ್ಯವಹಾರ ಎನಿಸಿದರೆ ಮಾತ್ರ ಚಿನ್ನ ಮತ್ತು ಆಭರಣವನ್ನು ಸ್ವೀಕರಿಸಲಾಗುವುದು.
2. ದಂಪತಿಗಳು ತಮ್ಮ ಗುರುತಿನ ಮತ್ತು ವಿಳಾಸದ ಪುರಾವೆ ಒದಗಿಸುವುದು ಕಡ್ಡಾಯ. ಅದಲ್ಲದೆ, ಅವರು ತಮ್ಮ ಬ್ಯಾಂಕ್ ಖಾತೆ ಮತ್ತು ಐಎಫ್‍ಎಸ್‍ಸಿ ಕೋಡ್ ಸಂಖ್ಯೆಯ ವಿವರಗಳನ್ನು ಹೊಂದಿರಬೇಕು. ಅವರು ಉದ್ಯೋಗದಲ್ಲಿದ್ದರೆ ತಮ್ಮ ಉದ್ಯೋಗದ ಗುರುತಿನ ಚೀಟಿ ಒದಗಿಸಬೇಕು. ಅವರು ಸ್ವಂತ ವ್ಯಾಪಾರ ಹೊಂದಿದ್ದರೆ ಅದರ ನೋಂದಣಿ ಪ್ರಮಾಣ ಪತ್ರ ಅಥವಾ ಆ ವ್ಯಾಪಾರಕ್ಕೆ ಸಂಬಂಧಿಸಿದ ಜಿಎಸ್‍ಟಿ ವಿವರಗಳನ್ನು ತೋರಿಸಬೇಕು.
3.ಮಹಿಳೆಯರಿಗೆ ತಮ್ಮ ಚಿನ್ನಾಭರಣವನ್ನು ಮಾರಲು ಯಾವ ನಿರ್ಬಂಧವೂ ಇಲ್ಲ. ಅವರು ತಮ್ಮ ವಿಳಾಸದ ಪುರಾವೆ ಮತ್ತು ಖರೀದಿಯ ಮಾಹಿತಿಯೊಂದಿಗೆ ಒಬ್ಬರೇ ನಮ್ಮ ಕಛೇರಿಗೆ ಬರಬಹುದು. ಇದು ಏಕೆಂದರೆ 99% ಚಿನ್ನದ ಆಭರಣಗಳನ್ನು ಮಹಿಳೆಯರೇ ಉಪಯೋಗಿಸುವುದರಿಂದ ಆರ್-ಗೋಲ್ಡ್ ಮಹಿಳೆಯ ಉಪಸ್ಥಿತಿಯಿಲ್ಲದೆ ಚಿನ್ನಾಭರಣ ಮಾರುವುದನ್ನು ಒಪ್ಪುವುದಿಲ್ಲ.
4. ಆರ್-ಗೋಲ್ಡ್ ಕಂಪನಿ ನೀವು ದಂಪತಿ (ಪತಿ-ಪತ್ನಿ) ಸಮೇತರಾಗಿ, ಅಥವಾ ನಿಮ್ಮ ತಂದೆ ಅಥವಾ ತಾಯಿಯೊಂದಿಗೆ, ಅಥವಾ ಸಂಬಂಧಿಕರೊಂದಿಗೆ ಬಂದರೆ ಮಾತ್ರ ಚಿನ್ನದ ಆಭರಣವನ್ನು ಖರೀದಿಸುತ್ತದೆ. ಯಾರಾದರು ಗ್ರಾಹಕರು ಮೂರನೆಯ ವ್ಯಕ್ತಿ ಅಥವಾ ಅಡವು ವ್ಯಾಪಾರಿಯೊಂದಿಗೆ ಕೇಳಿದ ಸರಿಯಾದ ಮಾಹಿತಿಯಿಲ್ಲದೆ ಬಂದರೆ ಆರ್-ಗೋಲ್ಡ್ ಕಂಪನಿ ಖರೀದಿಸಲು ಒಪ್ಪುವುದಿಲ್ಲ.
5. ಪುರುಷರು ಒಂಟಿಯಾಗಿ ಬಂದರೆ, ಅವರು ಆ ಚಿನ್ನಾಭರಣಕ್ಕೆ ತಮ್ಮ ಹೆಸರಿನಲ್ಲಿರುವ ಬಿಲ್‍ಗಳನ್ನು ಒದಗಿಸಬೇಕು ಅಥವಾ ತಮ್ಮ ಉದ್ಯೋಗಿ ಗುರುತಿನ ಚೀಟಿ ಮತ್ತು ವ್ಯಾಪಾರಿಯಾಗಿದ್ದರೆ ತಮ್ಮ ಜಿಎಸ್‍ಟಿಐಎನ್ ವಿವರಗಳನ್ನು ನೀಡಬೇಕು. ಚಿನ್ನಾಭರಣಗಳನ್ನು ವಿದೇಶದಲ್ಲಿ ಖರೀದಿಸಿದ್ದರೆ, ಗ್ರಾಹಕರು ಬಿಲ್ ನ ಜೊತೆಗೆ ತಮ್ಮ ಪಾಸ್‍ಪೋರ್ಟ್ ಕೂಡ ನೀಡಬೇಕು.
6. ಆರ್-ಗೋಲ್ಡ್ ಯಾರಾದರು ಗ್ರಾಹಕರ ಮೇಲೆ ಸಂಶಯ ಪಟ್ಟರೆ ಅಥವಾ ಗ್ರಾಹಕರು ಸರಿಯಾದ ಮಾಹಿತಿ ನೀಡಲು ವಿಫಲರಾದರೆ ಅಥವಾ ವಿಚಾರಣೆಯ ನಂತರ ಸಂಶಯಾಸ್ಪದ ಎನಿಸಿದರೆ ಅಥವಾ ಆ ಚಿನ್ನ ಕಳುವು ಮಾಡಿದ್ದಾಗಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು.
7. ಗ್ರಾಹಕರು ಮಾರಾಟದ ಮೌಲ್ಯದ ನಿರ್ದಿಷ್ಟ ಮೊತ್ತವನ್ನು ನಗದಿನ ರೂಪದಲ್ಲಿ ಪಡೆಯಬಹುದು. ನಿರ್ದಿಷ್ಟ ನಗದು ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಆರ್ ಟಿ ಜಿ ಎಸ್ / ಐಎಂಪಿಎಸ್ ಮೂಲಕ ಪಡೆಯಬಹುದು.
ಚಿನ್ನದ ವಿಕಸನದಲ್ಲಿ 22 CT, KDM, 916 KDM, 88 KDM, 22/20 KDM ಮುಂತಾದ ಅನೇಕ ಚಿಹ್ನೆಗಳನ್ನು ಉಪಯೋಗಿಸಲಾಗಿದೆ. ಇದರಿಂದಾಗಿ ಬಹಳಷ್ಟು ಸುಳ್ಳು ಮಾಹಿತಿ ನೀಡಲಾಗಿದೆ ಮತ್ತು ಉಪಯೋಗಿಸಿದ ಚಿನ್ನದ ಚಿಲ್ಲರೆ ವ್ಯಾಪಾರಿಗಳ ಗ್ರಾಹಕರು ತಮ್ಮ ಹಳೆಯ ಚಿನ್ನವನ್ನು ಮಾರುವಾಗ ತಮ್ಮ ಹಣ ಕಳೆದುಕೊಂಡಿದ್ದಾರೆ. ಇದನ್ನು ಅರಿತ ನಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಚಿನ್ನಕ್ಕೆ BIS ಹಾಲ್ ಮಾರ್ಕ್ ಅನ್ನು ಪರಿಚಯಿಸಿದೆ. ಗ್ರಾಹಕರಿಗೆ ಚಿನ್ನ ಮಾರುವ ಚಿಲ್ಲರೆ ವ್ಯಾಪಾರಿಗಳಿಗೆ ಎಲ್ಲಾ ಚಿನ್ನಗಳ ಮೇಲೆ BIS ಹಾಲ್ ಮಾರ್ಕ್ ಮುದ್ರೆ ಒತ್ತಲು ಆದೇಶ ಹೊರಡಿಸಿದೆ. ಇದು ಗುಣಮಟ್ಟಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಿದೆ ಮತ್ತು ಚಿನ್ನದ ಗ್ರಾಹಕರ ಚಿಂತೆಯನ್ನು ದೂರ ಮಾಡಿದೆ, ಹಾಗೆಯೇ ಚಿನ್ನ ಖರೀದಿಸುವುದರಲ್ಲಿ ನಂಬಿಕೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೆ, BIS ಹಾಲ್ ಮಾರ್ಕ್ ಅನ್ನು ಎಲ್ಲಾ ಚಿನ್ನಗಳ ಮೇಲೆ ಕಾರ್ಯರೂಪಕ್ಕೆ ತಂದರೆ ಯಾರಿಗೂ ಯಾವ ನಷ್ಟವೂ ಉಂಟಾಗುವುದಿಲ್ಲ. ಚಿನ್ನದ ಪುನರ್ಬಳಕೆ ಮತ್ತು ಅದರ ಶುದ್ಧತೆ ಕೂಡ ಬಹಳಷ್ಟು ಹೆಚ್ಚುತ್ತದೆ ಮತ್ತು ಚಿನ್ನದ ಆಮದು ಕೂಡ ತುಂಬಾ ಕಡಿಮೆಯಾಗುತ್ತದೆ.
ಚಿನ್ನ ವ್ಯಾಪಾರವನ್ನು ಕ್ರಮಬದ್ಧಗೊಳಿಸಿದ ಹೊರತಾಗಿಯೂ ಚಿನ್ನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಅದರ ಕಳುವೂ ಕೂಡ ವೇಗವಾಗಿ ಹೆಚ್ಚುತ್ತಿದೆ. ಹೆಚ್ಚಿನ ಚಿನ್ನ ವ್ಯಾಪಾರದ ಕಂಪನಿಗಳು ಸರಿಯಾದ ಗುರುತಿನ ಚೀಟಿ ತೆಗೆದುಕೊಳ್ಳುವುದಿಲ್ಲ ಅಥವಾ ಸುಳ್ಳು ಅಥವಾ ತಪ್ಪು ಗುರುತಿನ ಚೀಟಿ ತೆಗೆದುಕೊಳ್ಳುತ್ತಾರೆ, ನಂತರ ಆ ಗ್ರಾಹಕರ ಚಿನ್ನ ಅಡವಿಟ್ಟುಕೊಳ್ಳುತ್ತಾರೆ. ಇದರಿಂದಾಗಿ ಚಿನ್ನದ ಕಳ್ಳತನವಾಗುತ್ತಿದೆ. ತಪ್ಪು ಗುರುತಿನ ಚೀಟಿ ಮತ್ತು ವಿಳಾಸವನ್ನು ತೆಗೆದುಕೊಂಡು ಅಡವಿಟ್ಟ ಚಿನ್ನದ ಹರಾಜಿನ ಮಾಹಿತಿಯ ಪತ್ರ ಮತ್ತು ಸೂಚನೆಗಳನ್ನು ಆ ವಿಳಾಸಕ್ಕೆ ಕಳುಹಿಸುತ್ತಾರೆ. ಅಂತಹ ಪತ್ರ ಮತ್ತು ಸೂಚನೆಗಳು ವಿಳಾಸ ತಪ್ಪಾಗಿದೆ ಎಂದು ವಾಪಸ್ಸು ಬಂದರೂ ಕೂಡ ಅವರು ಇದನ್ನು ಪೊಲೀಸರಿಗೆ ತಿಳಿಸುವುದಿಲ್ಲ. ಅವರು ಮೋಸದ ಹರಾಜನ್ನು ತಯಾರು ಮಾಡಿ ಆ ಆಭರಣಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಚಿನ್ನದ ಕಳುವು ಹೆಚ್ಚಾಗುವುದಕ್ಕೆ ಇದೂ ಕೂಡ ಒಂದು ಕಾರಣ . ಯಾರಾದರೂ ಕಳುವು ಮಾಡಿದ ಚಿನ್ನವನ್ನು ಮಾರಲು ಅಥವಾ ಅಡವಿಡಲು ಪ್ರಯತ್ನಿಸಿದರೆ ಪ್ರಾಮಾಣಿಕ ಕಂಪನಿ ಅದನ್ನು ಪೊಲೀಸರಿಗೆ ತಿಳಿಸಿ ಆ ವ್ಯಕ್ತಿಯನ್ನು ಅವರಿಗೆ ಹಸ್ತಾಂತರಿಸುತ್ತದೆ. ಕಂಪನಿಗಳು ಕಳುವಿನ ಚಿನ್ನವನ್ನು ಖರೀದಿಸುವುನ್ನು ಅಥವಾ ಅಡವಿಟ್ಟುಕೊಳ್ಳುವುದನ್ನು ನಿಷೇಧಿಸಿದರೆ ಕಳ್ಳತನ ನಿಲ್ಲುತ್ತದ್ದೆ. ಸಂಶಯಾಸ್ಪದ ವ್ಯಕ್ತಿಯಿಂದ ಚಿನ್ನಾಭರಣವನ್ನು ಅಡವಿಟ್ಟುಕೊಂಡ ಮೇಲೆ, ಅಡವು ಕಂಪನಿ ಅದನ್ನು ಉಪಯೋಗಿಸಿದ ಚಿನ್ನಾಭರಣ ಖರೀದಿಸುವವರಿಗೆ ಮಾರುತ್ತದೆ ಮತ್ತು ಆ ಕಂಪನಿಗಳು ಕಳುವಾದ ಚಿನ್ನವನ್ನು ಮಾರುತ್ತಿವೆ ಎಂದು ಪೊಲೀಸರಿಗೆ ದೂರು ನೀಡುತ್ತವೆ. ಅದಕ್ಕಾಗಿಯೇ ಯಾವುದೇ ಲಾಭದ ಉದ್ದೇಶವಿಲ್ಲದೆ, ತಮ್ಮ ಗ್ರಾಹರಲ್ಲಿ ಚಿನ್ನಾಭರಣಗಳ ಗುಣಮಟ್ಟದ ಬಗ್ಗೆ ಅರಿವನ್ನು ಮೂಡಿಸುವುದಕ್ಕಾಗಿ ಮತ್ತು ಅವರನ್ನು ಕಳುವಾದ ಚಿನ್ನಾಭರಣಗಳಿಂದ ರಕ್ಷಿಸುವುದಕ್ಕಾಗಿ ಆರ್-ಗೋಲ್ಡ್ ಕಂಪನಿಯನ್ನು ಸ್ಥಾಪಿಸಲಾಗಿದೆ. ಯಾವುದೇ ಕಾರಣಕ್ಕೂ ಆರ್-ಗೋಲ್ಡ್ ಕಂಪನಿ ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ವ್ಯಕ್ತಿಯೊಂದಿಗೆ ಸಂಭಾಷಿಸುವುದಿಲ್ಲ. ನಾವು ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ವ್ಯಕ್ತಿಗಳ ಕರೆಗೆ ಅಥವಾ ನಮ್ಮ ಕಛೇರಿ ಭೀಟಿಗೆ ಸ್ಪಂದಿಸುವುದಿಲ್ಲ. ಅದಲ್ಲದೆ, ಅಡವು ಚಿನ್ನವನ್ನು ಚಿನ್ನದ ವ್ಯಾಪಾರಿಗಳಿಂದ ಖರೀದಿಸಲಾಗುವುದಿಲ್ಲ ಮತ್ತು ಆರ್-ಗೋಲ್ಡ್ ಕೇವಲ ನಂಬಿಕಸ್ಥ ಮತ್ತು ಗುರುತಿಸಲು ಸಾಧ್ಯವಿರುವ ಗ್ರಾಹಕರಿಂದ ಮಾತ್ರ ಖರೀದಿಸುತ್ತದೆ. ಆರ್-ಗೋಲ್ಡ್ ಎಂದಿಗೂ ನಿಮ್ಮ ಮನೆಯಿಂದ ಚಿನ್ನಾಭರಣವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಹೋಮ್ ಸರ್ವೀಸ್ ಒದಗಿಸುವುದಿಲ್ಲ. ನಾವು ನಮ್ಮ ಕಛೇರಿಗೆ ಖುದ್ದಾಗಿ ಬರುವ, ಮತ್ತು ಸರಿಯಾದ ಗುರುತಿನ ಚೀಟಿ ಮತ್ತು ವಿಳಾಸದ ಮಾಹಿತಿಯಿರುವ ಗ್ರಾಹಕರಿಂದ ಮಾತ್ರ ಚಿನ್ನಾಭರಣವನ್ನು ಖರೀದಿಸುತ್ತೇವೆ .
ಆರ್-ಗೋಲ್ಡ್ ನಮ್ಮ ಗ್ರಾಹಕರಿಗೆ ಅವರ ಆಭರಣದಲ್ಲಿರುವ ಚಿನ್ನದ ಶೇಕಡಾ ಪ್ರಮಾಣ ಮತ್ತು 99.9% ಶುದ್ಧ ಚಿನ್ನದ ಮಾರುಕಟ್ಟೆ ದರದ ಅನುಸಾರ ಸರಿಯಾದ ದರ ನೀಡುತ್ತದೆ.
We care for you
Get your Jewelry tested with our In use max sell gold purity analyzer, Incorporated with the latest technology from "USA" that ensures speed, accurate and reliable results to get the best value for your gold.
Sell gold with best market price at R-Gold Exchange. Our R-gold ensures that quick service for our customers to vary their gold to cash conversion. R-Gold Exchange Gold Buyers provide instant Cash for Gold. Our team of quality analysts is well-versed with all the trends and developments of the field. Our team of quality analysts is well-versed with all the trends and developments of the field.
Client Satisfaction and best customer service is our motto. Being a client-centric organization, our foremost objective is to deliver 100% satisfaction to esteemed clients. By offering them the best services in just few minutes, we save their time. By making free valuation of their gold assets and providing them the best prices, we have become a chosen name. R-gold has branches in Chennai, Salem, Karur, Tirupur, Krishnagiri , Udumalpet, Mettupalayam, Madurai, Hosur, Nagarkoil and Erode you can sell your gold in nearest branch for best prize.
Get complete information about the gold rate in R-Gold Exchange. If you want to sell gold. Please Contact Us.